Wednesday, 02 August 2017

ಕನ್ನಡ ಸಾಹಿತ್ಯ ವಿಚಾರ ವೇದಿಕೆ ಉದ್ಘಾಟನಾ ಸಮಾರಂಭ

ಕನ್ನಡ ವಿಭಾಗ

ಕನ್ನಡ ಸಾಹಿತ್ಯ ವಿಚಾರ ವೇದಿಕೆ ಉದ್ಘಾಟನಾ ಸಮಾರಂಭ :- 2017-18

ದಿನಾಂಕ:02.08.2017 ರ ಬುಧವಾರ ಮಧ್ಯಾನ 3 ಗಂಟೆಗೆ ಪ್ರತಿಬಾರಿಯಂತೆ , ಈ ಸಾಲಿನ ಕನ್ನಡ ಸಾಹಿತ್ಯ ವಿಚಾರ ವೇದಿಕೆಯನ್ನು ಉದ್ಘಾಟಿಸಲಾಯಿತ್ತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು, ಕಾಲೇಜಿನ ಹಿರಿಯ ಪ್ರಾಧ್ಯಾಪಕರಾದ ಪ್ರೋ. ನಂಜುಂಡಯ್ಯ ಭೌತಶಾಸ್ತ್ರ ವಿಭಾಗದ ಮುಖ್ಯಸ್ಧರು , ಇವರು ದೀಪ ಬೆಳೆಗಿಸಿ ಉದ್ಘಾಟಿಸಿದರು. ಕನ್ನಡ ವಿಭಾಗದ ಮುಖ್ಯಸ್ಧರಾದ , ಡಾ.S.ಗಿ ಲಕ್ಷ್ಮೀ ನಾರಾಯಣ್ ಇವರು ಪ್ರಾಸ್ತಾವಿಕ ನುಡಿಯನ್ನು ವಿದ್ಯಾರ್ಥಿಗಳ ಶೈಷಣಿಕ ದೃಷ್ಟಿಯಿಂದ ತಿಳಿಸಿದರು. ಹಾಗೆಯೇ ಪ್ರೋ. ನಂಜುಂಡಯ್ಯನವರು ಸಾಹಿತ್ಯ ವಿದ್ಯಾರ್ಥಿಗಳ ಮನಸ್ಸಿನಲ್ಲಿನ ಭಾವನೆಗಳನ್ನು ಶುದ್ದಿಗೊಳಿಸುತ್ತದೆ ಎಂದು ಹಿತನುಡಿಗಳನ್ನುಡಿದರು. ವಿದ್ಯಾರ್ಥಿಗಳೇ ಆಯೋಜಿಸಿದ್ದ, ಈ ಕಾರ್ಯಕ್ರಮ ಸರಳವಾಗಿದ್ದರೂ ಅರ್ಥಪೂರ್ಣವಾಗಿ ನೆರೆವೇರಿತು.

Wednesday, 02 August 2017
JoomShaper